ಭಗವತ್ ಪಾದಕೆ ವಿದ್ಯಾವಾಚಾಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಅಸ್ತಮಾನ

Share it with your friends Like

Thanks! Share it with your friends!

Close

ವಿದ್ಯಾವಾಚಸ್ಪತಿ ಅನಂತಲೀನ

ಇರವು ಸಂಪತ್ತಲ್ಲ.. ಇರುವಿನ ಅರಿವೇ ಸಂಪತ್ತು ಎಂದು ಅಸ್ತಿತ್ವದ ಆಧ್ಯಾತ್ಮವನ್ನ ಅತ್ಯಂತ ಸರಳವಾಗಿ ಕಲಿಸಿಕೊಟ್ಟಟ ಆಧ್ಯಾತ್ಮ ಗುರು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅನಂತಲೀನ. ಭಗವದ್ಗೀತೆ ಪಠಿಸುತ್ತಲೇ ಭಗವಂತ ಲೀನ. ಬನ್ನಂಜೆ ಗೋವಿಂದಾಚಾರ್ಯ ಸಂಸ್ಕೃತದ ಪ್ರಖಾಂಡ ಪಂಡಿತ. ಆಧ್ಯಾತ್ಮವನ್ನ ಸರಳವಾಗಿ ಸವಿಯುಣಿಸುವ ವೇದ ಪಾರಂಗತ. ಅಪ್ರತಿಮ ಮೇಧಾವಿ. ವೈವಿಧ್ಯಮಯ ಪ್ರತಿಭೆಗೆ ಕವಿತೆ, ಚಲನಚಿತ್ರ ಸಂಭಾಷಣೆ ಹಿಡಿದ ಕೈಗನ್ನಡಿ. ಆದರೆ ಶಾಲಾ ಓದಿದ್ದು ಮಾತ್ರ ಎರಡನೇ ತರಗತಿ ಎಂಬುದು ಸೋಜಿಗ ಚಕಿತ. ಉಡುಪಿಯ ಅಷ್ಟಮಠಗಳ ಸಾಂಪ್ರದಾಯಿಕ ಪ್ರಭಾವದಲ್ಲಿದ್ದರೂ ಆಧುನಿಕ ಚಿಂತಕ ವಿದ್ವಾಂಸ.
ಬರವಣಿಗೆಯೇ ಜೀವನ. ಮಾತಿನಂತೆಯೇ ನೇರ ನಡೆ-ನುಡಿ. ನಿಷ್ಠೂರ ಬರವಣಿಗೆ ಪತ್ರಿಕೋದ್ಯಮವನ್ನು ಸೆಳೆದಿತ್ತು. ಅವರ ಸಹಜ ಕುತೂಹಲಕ್ಕೆ ಸಿಕ್ಕಿದ್ದು ಸುಮಾರು ೧೫೦ಕ್ಕೂ ಹೆಚ್ಚು ಸಂಶೋಧನಾ ಕೃತಿಗಳು. ಅನುವಾದ ಅವರಿಗೆ ಒಲಿದ ಕಲೆ. ಸ್ವ ಅಧ್ಯಯನ ರೂಢಿಸಿಕೊಂಡ ಈ ಆಧ್ಯಾತ್ಮ ಏಕಲವ್ಯ ವೇದಪುರಾಣಗಳನ್ನ ಕೈಯಲ್ಲಿ ಹಿಡಿದು ದೇಶವಿದೇಶ ಸುತ್ತಿ ಭಾರತೀಯತೆಯನ್ನ, ಹಿಂದೂ ಸಂಸ್ಕೃತಿಯನ್ನ ಹಂಚಿದ್ದು ಪ್ರವಚನಗಳ ಮೂಲಕ. ಮೂವತ್ತು ಸಾವಿರ ಗಂಟೆಗೂ ಅಧಿಕ ಪ್ರವನದ ದಾಖಲೆ ಬಹುಶಃ ಈ ಪ್ರವಚನಕಾರರದ್ದೇ. ಅಧ್ಯಯನ, ಸಂಶೋಧನೆ ಇವರ ಜ್ಞಾನದ ಸಂಪತ್ತು. ವಿದ್ವಾಂಸರಿಂದ ಚರ್ಚಿಸಿ ಗಳಿಸಿದ ಜ್ಞಾನವನ್ನ ಸಮಾಜಕ್ಕೆ ಧಾರೆಯೆರೆದ ಜ್ಞಾನವಾದಿ. ಸಾಮಾಜಿಕ ಆಧ್ಯಾತ್ಮಿಕ ಸಮಸ್ಯೆಗಳಿಗೆ ಬನ್ನಂಜೆಯವರ ಚಿಂತನೆಯ ಮಾತುಗಳು ಸದಾ ಚೈತನ್ಯದ ಪರಿಹಾರದ ಚಿಲುಮೆ.
ದಕ್ಷಿಣಕನ್ನಡದಲ್ಲಿ ಪಡುಮನ್ನೂರು ನಾರಾಯಣಾಚಾರ್ಯ- ಸತ್ಯಭಾಮ ದಂಪತಿಯ ಪುತ್ರ ಬನ್ನಂಜೆ, ೧೯೩೬ರಲ್ಲಿ ಜನನ. ಶಾಲಾ ಓದು ಸಿಗದೇ ಹೋದರೂ ಪಳಗಿದ್ದು ಅಣ್ಣ ಪತ್ರಕರ್ತ ರಾಮಾನುಜಾಚಾರ್ಯರ ಗರಡಿಯಲ್ಲಿ. ೬೫ವರ್ಷಗಳ ಸತತ ಅಧ್ಯಯನದಿಂದ ದೊರೆತ ಅನುಭವ ಮತ್ತು ಅಮೂಲ್ಯಜ್ಞಾನ ಅವರನ್ನ ವಾಗ್ಮಿಯನ್ನಾಗಿಸಿತ್ತು. ಪ್ರತಿಯೊಂದು ನುಡಿ ಸಮಾಜಕ್ಕೆ ಉಡುಗೊರೆ. ಪ್ರತಿಯೊಂದು ಮೌಲ್ಯದ ಮಾತುಗಳು. ಪ್ರತಿಮಾತಿಗೂ ಅಧ್ಯಯನದ ತಳಹದಿ. ಸಂಶೋಧನೆಯ ಮೆರಗು.
ಇವರ ಜ್ಞಾನದ ಫಲವಾಗಿಯೇ ಅರಳಿದ್ದು, ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳು. ಸಂಸ್ಕೃತ ಭಾಷೆಯಲ್ಲಿ ೩೦ ಕೃತಿಗಳದ್ದರೆ, ೧೩೦ಕ್ಕೂ ಅಧಿಕ ಕನ್ನಡ ಪುಸ್ತಕಗಳನ್ನ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಇನ್ನೂ ೪೫ ಪುಸ್ತಕಗಳು ಪ್ರಕಟವಾಗಬೇಕಿರುವುದು ಅವರ ಸತತ ಅಧ್ಯಯನಶೀಲತೆಯ ಫಲಿತಾಂಶ.
ವೇದ-ಉಪನಿಷತ್ತು, ಬ್ರಹ್ಮಸೂತ್ರ, ಮಹಾಭಾರತ, ರಾಮಾಯಣ, ಪುರಾಣ ಕೃತಿಗಳ ಸಂಶೋಧನೆಯಿಂದಾಗಿ ಬನ್ನಂಜೆ ಆಚಾರ್ಯ ಜನಜನಿತ. ದೇಶ-ವಿದೇಶಗಳಲ್ಲಿ ಅಭಿಮಾನಿಗಳು, ಶಿಷ್ಯರು. ಅಮೆರಿಕ, ಆಸ್ಟ್ರೇಲಿಯಾ, ಯುರೋಪ್, ಇಂಡೋನೇಷ್ಯಾ, ರಷ್ಯಾ, ನೆದರ್ ಲ್ಯಾಂಡ್, ಸ್ವಜರ್ ಲ್ಯಾಂಡ್, ಗ್ರೀಸ್ ಮತ್ತಿತರ ದೇಶಗಳಲ್ಲಿ ಅವರಿಗೆಅನುಯಾಯಿಗಳು, ಶಿಷ್ಯರು, ವಿದ್ಯಾರ್ಥಿಗಳು. ವಿದೇಶೀಯರಿಗೆ ಭಾರತೀಯರ ಹೆಸರನ್ನ ನಾಮಕರಣ ಮಾಡುವುದು ಬನ್ನಂಜೆ ಅವರ ವಿಶೇಷ.
#sionbeyondnews#BannajeGovindaChary#BhagatGeeta#Hinduculture#vedas#upanishads#indanculture#Hinduepics#Mahabharat#Ram
Instagram: https://instagram.com/s2k_opus_media?igshid=iw1iimnio60cTwitter https://twitter.com/OpusS2k?s=08Facebook:https://www.facebook.com/S2K-OPUS-MEDIA-123497372826017SION IS AN INDEPENDENT MEDIA. we are spreading the free voice. pls support. share and subscribe.

#BannanjeGovindaCharya#udupimata#vedicculture#IndinHinduculture#traditon

#BannanjeGovindaCharya#udupimata#vedicculture#IndinHinduculture#traditon

Comments

anantha B M says:

I am really very proud of you the way you have depicted the great man is fantastic all the best for you

Seeta mallabadi says:

ತಮ್ಮ ಎಲ್ಲಾ ಶಾರ್ಟ್ ವೀಡಿಯೋಸ್ ತುಂಬಾ ಅರ್ಥಪೂರ್ಣವಾಗಿ ಸುಂದರವಾಗಿ ಬಂದಿದೆ.
ಬನ್ನಂಜೆ ಆಚಾರ್ಯರು ನಮ್ಮ ಅನುಕರಣೀಯ ಅವರಿಂದ ಪ್ರಭಾವಿತರಾದವರು ಕುರಿತು ಚಿತ್ರ ಚೆನ್ನಾಗಿ ಬಂದಿದೆ.

Write a comment

*