Dr Bannanje Samsmarana 01

Share it with your friends Like

Thanks! Share it with your friends!

Close

Dr Bannanje Samsmarana (10.01.2021)
At : Govardhana Giri Guhalaya Kshetra, Bengalore
ಬೆಂಗಳೂರು : ಅಮೇರಿಕಾದಲ್ಲಿ ಆಚಾರ್ಯ ಮಧ್ವರ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂಬ ಬನ್ನಂಜೆ ಗೋವಿಂದಾಚಾರ್ಯ ಅಪೇಕ್ಷೆ ಈಡೇರಿಸಲು ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಗೋವರ್ಧನಗಿರಿ ಪುತ್ತಿಗೆ ಮಠದಲ್ಲಿ ನಡೆದ ಬನ್ನಂಜೆ ಗೋವಿಂದಾಚಾರ್ಯ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಪಾದರು ಬನ್ನಂಜೆ ಅವರ ಒಡನಾಟ ಐದು ದಶಕಗಳಿಗೂ ಮೀರಿದ್ದು ಎಂದರು. ತಮ್ಮ ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳ ಮುಂದೆ ತಾವು ಪತ್ರಿಕೆಯಲ್ಲಿ ಪ್ರಕಟ ಪ್ರಕಟವಾಗುತ್ತಿದ್ದ ಬನ್ನಂಜೆ ಗೋವಿಂದಾಚಾರ್ಯರ ಕಿಷ್ಕಿಂಧಾಕಾಂಡ ಅಂಕಣ ಬರಹವನ್ನು ಓದಿ ಅವರ ಪ್ರೌಢಿಮೆಗೆ ಬೆರಗಾಗಿದ್ದ ವಿಚಾರವನ್ನು ವಿವರಿಸಿದರು,
ಶ್ರೀ ವಿದ್ಯಾಮಾನ್ಯತೀರ್ಥರ ಅಪೇಕ್ಷೆಯಂತೆ ಸುಗುಣ ಮಾಲಾ ಮಾಸಪತ್ರಿಕೆಯನ್ನು ಆರಂಭಿಸಿ ಬನ್ನಂಜೆ ಗೋವಿಂದಾಚಾರ್ಯ ರನ್ನು ನಿರ್ದೇಶಕರನ್ನಾಗಿ ನಿಯುಕ್ತಿ ಮಾಡಿದ್ದಲ್ಲದೆ ಅವರಿಂದ ವೇದಗಳ ಸಂದೇಶ ಹಾಗೂ ಭಗವದ್ಗೀತಾ ಭಾಷ್ಯ ಸಮೀಕ್ಷೆಯನ್ನು ನಿಯತವಾಗಿ ದಶಕಗಳ ಗಟ್ಟಲೆ ಪ್ರಕಟಿಸಲಾಯಿತು ಎಂದು ಶ್ರೀಪಾದರು ನೆನಪಿಸಿಕೊಂಡರು.
ಬನ್ನಂಜೆಯವರು ವೇದಾಂತದಲ್ಲಿ ಮಾಡಿದಷ್ಟೇ ಕೃಷಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಕೂಡ ಮಾಡಿದ್ದರು ಆದರೆ ರಾಜಕೀಯ ಮೇಲಾಟ ಗಳಿಂದ ಅವರಿಗೆ ದತ್ತ ಬೇಕಾಗಿದ್ದ ಪ್ರಶಸ್ತಿ-ಪುರಸ್ಕಾರಗಳು ದೂರ ಉಳಿಯಿತು ಎಂದು ಖ್ಯಾತ ಅಂಕಣ ಬರಹಗಾರ ರೋಹಿತ್ ಚಕ್ರತೀರ್ಥ ವಿಷಾದಿಸಿದರು. ಬನ್ನಂಜೆಯವರು ಜ್ಞಾನಪೀಠ ಪುರಸ್ಕಾರಕ್ಕೆ ಅರ್ಹರಾಗಿದ್ದವರು ಎಂದ ರೋಹಿತ್ ಅವರು ಕನ್ನಡಭಾಷೆಗೆ ಬನ್ನಂಜೆ ಅವರು ತಮ್ಮ ಪ್ರವಚನಗಳ ಮತ್ತು ಬರಹಗಳ ಮೂಲಕ ನೀಡಿರುವ ಅನೇಕ ಹೊಸಪದಗಳನ್ನು ನಿಘಂಟಿನ ರೂಪದಲ್ಲಿ ಪ್ರಕಾಶಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ವಿದ್ವಾಂಸರಾದ ರಾಮಾಚಾರ್ಯ ಬಂಡಿ ಕಲಾವಿದ ಕೆಎನ್ ಶೇಷಗಿರಿ ಬನ್ನಂಜೆ ಅವರ ಜೊತೆಗೆ ಇದ್ದ ತಮ್ಮ ಒಡನಾಟವನ್ನು ಮೆಲಕು ಹಾಕಿದರು. : ಅಮೇರಿಕಾದಲ್ಲಿ ಆಚಾರ್ಯ ಮಧ್ವರ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂಬ ಬನ್ನಂಜೆ ಗೋವಿಂದಾಚಾರ್ಯ ಅಪೇಕ್ಷೆ ಈಡೇರಿಸಲು ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಗೋವರ್ಧನಗಿರಿ ಪುತ್ತಿಗೆ ಮಠದಲ್ಲಿ ನಡೆದ ಬನ್ನಂಜೆ ಗೋವಿಂದಾಚಾರ್ಯ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಪಾದರು ಬನ್ನಂಜೆ ಅವರ ಒಡನಾಟ ಐದು ದಶಕಗಳಿಗೂ ಮೀರಿದ್ದು ಎಂದರು. ತಮ್ಮ ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳ ಮುಂದೆ ತಾವು ಪತ್ರಿಕೆಯಲ್ಲಿ ಪ್ರಕಟ ಪ್ರಕಟವಾಗುತ್ತಿದ್ದ ಬನ್ನಂಜೆ ಗೋವಿಂದಾಚಾರ್ಯರ ಕಿಷ್ಕಿಂಧಾಕಾಂಡ ಅಂಕಣ ಬರಹವನ್ನು ಓದಿ ಅವರ ಪ್ರೌಢಿಮೆಗೆ ಬೆರಗಾಗಿದ್ದ ವಿಚಾರವನ್ನು ವಿವರಿಸಿದರು, ಶ್ರೀ ವಿದ್ಯಾಮಾನ್ಯತೀರ್ಥರ ಅಪೇಕ್ಷೆಯಂತೆ ಸುಗುಣ ಮಾಲಾ ಮಾಸಪತ್ರಿಕೆಯನ್ನು ಆರಂಭಿಸಿ ಬನ್ನಂಜೆ ಗೋವಿಂದಾಚಾರ್ಯ ರನ್ನು ನಿರ್ದೇಶಕರನ್ನಾಗಿ ನಿಯುಕ್ತಿ ಮಾಡಿದ್ದಲ್ಲದೆ ಅವರಿಂದ ವೇದಗಳ ಸಂದೇಶ ಹಾಗೂ ಭಗವದ್ಗೀತಾ ಭಾಷ್ಯ ಸಮೀಕ್ಷೆಯನ್ನು ನಿಯತವಾಗಿ ದಶಕಗಳ ಗಟ್ಟಲೆ ಪ್ರಕಟಿಸಲಾಯಿತು ಎಂದು ಶ್ರೀಪಾದರು ನೆನಪಿಸಿಕೊಂಡರು.
ಬನ್ನಂಜೆಯವರು ವೇದಾಂತದಲ್ಲಿ ಮಾಡಿದಷ್ಟೇ ಕೃಷಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಕೂಡ ಮಾಡಿದ್ದರು ಆದರೆ ರಾಜಕೀಯ ಮೇಲಾಟ ಗಳಿಂದ ಅವರಿಗೆ ದತ್ತ ಬೇಕಾಗಿದ್ದ ಪ್ರಶಸ್ತಿ-ಪುರಸ್ಕಾರಗಳು ದೂರ ಉಳಿಯಿತು ಎಂದು ಖ್ಯಾತ ಅಂಕಣ ಬರಹಗಾರ ರೋಹಿತ್ ಚಕ್ರತೀರ್ಥ ವಿಷಾದಿಸಿದರು. ಬನ್ನಂಜೆಯವರು ಜ್ಞಾನಪೀಠ ಪುರಸ್ಕಾರಕ್ಕೆ ಅರ್ಹರಾಗಿದ್ದವರು ಎಂದ ರೋಹಿತ್ ಅವರು ಕನ್ನಡಭಾಷೆಗೆ ಬನ್ನಂಜೆ ಅವರು ತಮ್ಮ ಪ್ರವಚನಗಳ ಮತ್ತು ಬರಹಗಳ ಮೂಲಕ ನೀಡಿರುವ ಅನೇಕ ಹೊಸಪದಗಳನ್ನು ನಿಘಂಟಿನ ರೂಪದಲ್ಲಿ ಪ್ರಕಾಶಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ವಿದ್ವಾಂಸರಾದ ರಾಮಾಚಾರ್ಯ ಬಂಡಿ ಕಲಾವಿದ ಕೆಎನ್ ಶೇಷಗಿರಿ ಬನ್ನಂಜೆ ಅವರ ಜೊತೆಗೆ ಇದ್ದ ತಮ್ಮ ಒಡನಾಟವನ್ನು ಮೆಲಕು ಹಾಕಿದರು.

ಈ ಸಂದರ್ಭದಲ್ಲಿ ಬನ್ನಂಜೆಯವರ ಭಗವದ್ಗೀತೆ ಆಚಾರ್ಯತ್ರಯಭಾಷ್ಯ ವಿಮರ್ಶೆಯ 2 ನೇ ಅಧ್ಯಾಯದ ಪುಸ್ತಕವನ್ನು ಪುತ್ತಿಗೆ ಶ್ರೀಗಳು ಬಿಡುಗಡೆ ಗೊಳಿಸಿದರು.
ಅದೇರೀತಿ ಬನ್ನಂಜೆ ವಿರಚಿತ ಪ್ರಮೆಯನವ ಮಾಲಿಕೆಯ ಉದ್ಘಾಟಿಸಲಾಯಿತು

Comments

Hemanth Gowda says:

🙏🙏🙏❤

manjunatha nayaka says:

🙏🙏🙏🙏🙏

RAGHAVENDRA PRASAD says:

ANANTHA PRANAM.
SRI GURUBHYO NAMAH.

asha santhosh says:

Hare Krishna Dandavat pranam

Write a comment

*